Skip to main content

Posts

Showing posts from November, 2025

Sariyagi nenapide helu Kannada songs lyrics

Sariyagi nenapide helu Kannada songs lyrics  Singer: Aramam Lyrics: January ಸರಿಯಾಗಿ ನೆನೆಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ. ಸರಿಯಾಗಿ ನೆನೆಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ ಮನದ ಪ್ರತಿ ಗಲ್ಲಿಯೊಳಗೂ ನಿನದೆ ಮೆರವಣಿಗೆ ಕನಸಿನ ಕುಲುಮೆಗೆ ಉಸಿರನು ಊದುತ ಕಿಡಿ ಹಾರುವುದು ಇನ್ನು ಖಚಿತ ಸರಿಯಾಗಿ ನೆನೆಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ. ಕಣ್ಣಲ್ಲೇ ಇದೆ ಎಲ್ಲಾ ಕಾಗದ ನೀನೇ ನನ್ನಯ ಅಂಚೆ ಪೆಟ್ಟಿಗೆ ಏನೇ ಕಂಡರೂ ನೀನೇ ಜ್ಞಾಪಕ ನೀನೇ ಔಷಧಿ ನನ್ನ ಹುಚ್ಚಿಗೆ ತೆರೆದು ನೀನು ಮುದ್ದಾದ ಅಧ್ಯಾಯ ಸಿಗದೇ ಇದ್ರೆ ತುಂಬಾನೆ ಅನ್ಯಾಯ ನನ್ನಯ ನಡೆ ನುಡಿ ನಿನ್ನನೇ ಬಯಸುತ ಬದಲಾಗುವುದು ಇನ್ನು ಖಚಿತ ಸರಿಯಾಗಿ ನೆನೆಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ. ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದ ರಂಗಸಜ್ಜಿಕೆ ನಿನ್ನ ನೋಡದ ನನ್ನ ಜೀವನ ಸುದ್ದಿ ಇಲ್ಲದ ಸುದ್ದಿ ಪತ್ರಿಕೆ ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು ಸರಸಕ್ಕೀಗ ನಿಂದೇನೆ ಕಾನೂನು ತೊರೆಯುವ ನೆನೆಪಲಿ ಇರುಳನು ಕಳೆಯುತ ಬೆಳಗಾಗುವುದು ಇನ್ನು ಖಚಿತ ಸರಿಯಾಗಿ ನೆನೆಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ. Sariyagi nenapide nanage idakella karana kirunage Sariyagi nenapide nanage idakella karana kirunage Manada prathi galliyolagu ninade meravanige Kanasina kulumege usiranu udutha kidi ...